TV9 Kannada · DistrictNews · 2026-09-29
ರಷ್ಯಾದ ಮಿಲಿಟರಿ ವಿಮಾನ ಪತನ; 6 ಜನ ಸಾವು
ಮಾಸ್ಕೋ, ಸೆಪ್ಟೆಂಬರ್ 29: ರಷ್ಯಾದ ಅಮುರ್ ಪ್ರಾಂತ್ಯದಲ್ಲಿ ತರಬೇತಿ ಹಾರಾಟ ನಡೆಸುತ್ತಿದ್ದ ರಷ್ಯನ್ ಮಿಲಿಟರಿಯ ‘ತುಪೊಲೆವ್ ಟು-95’ ಬಾಂಬರ್ ವಿಮಾನ ಇಂದು ಅಪಘಾತಕ್ಕೀಡಾಗಿದ್ದು, ವಿಮಾನದಲ್ಲಿದ್ದ 6 ಮಂದಿ ಸಿಬ್ಬಂದಿ ಮೃತಪಟ್ಟು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಷ್ಯಾ ರಕ್ಷಣಾ ಸಚಿವಾಲಯ ತಿಳಿಸಿದೆ. ಕ್ರಾಸ್ನೊಯಾರೋವೊ ಗ್ರಾಮದ ಬಳಿಯ ಜನವಸತಿಯಿಲ್ಲದ ಪ್ರದೇಶದಲ್ಲಿ, ವಿಮಾನವು ಪಶ್ಚಿಮಕ್ಕೆ ಜಿಗಿದು ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಈ ದುರಂತ ಸಂಭವಿಸಿದೆ. ಈ ವಿಮಾನದಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರು. ವಿಮಾನ ಅಪಘಾತದಲ್ಲಿ 6 ಮಂದಿ ದುರಂತ ಅಂತ್ಯ ಕಂಡಿದ್ದಾರೆ. ಈ ಪೈಕಿ ಇಬ್ಬರು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
Read original on TV9 Kannada Get the app
Licensed summary · LicensedSummary
Related briefs
- Tigress Rescued: বিহারের বাল্মীকী টাইগার রিজার্ভে অবশেষে ঘুম পাড়ানি গুলিতে
- Bedroom Cleaning Tips: బెడ్రూమ్లో కంటికి కనిపించని దుమ్ము ఉంటుందా? ఈ టిప్స్
- शिशू आहारासाठी तुकाराम मुढेंचे नवे नियम; चूक झाल्यास थेट… नेमकं काय सांगितलं?
- బ్రతికున్నవారు చనిపోయినట్లు కల వస్తే ఏమవుతుంది? అశుభమా.. శుభసూచకమా?
- సున్నుండ కంటే 10 రెట్లు బలం! 20 రోజులు నిల్వ ఉండే స్వీట్ రోల్