TooBrief TooBrief

Home / Headlines

ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್​ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!

TV9 Kannada · DistrictNews · 2026-09-29

ಹಣ ದೋಚಲು ಬಂದ ಕಳ್ಳರಿಗೆ ಶಾಕ್; ಎಟಿಎಂ ಬೂತ್​ನೊಳಗೆ ಕೂಡಿ ಹಾಕಿದ ಬ್ಯಾಂಕ್ ಮ್ಯಾನೇಜರ್!

ನಾಗೌರ್, ಸೆಪ್ಟೆಂಬರ್ 29: ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ತಡರಾತ್ರಿ ಎಟಿಎಂ ಲೂಟಿ ಮಾಡಲು ಯತ್ನಿಸಿದ ಕಳ್ಳರನ್ನು ಬ್ಯಾಂಕ್ ಮ್ಯಾನೇಜರ್ ಮತ್ತು ಆಕೆಯ ಪತಿ ಸೇರಿ ಎಟಿಎಂ ಬೂತ್‌ನೊಳಗೇ ಲಾಕ್ ಮಾಡಿ ಪೊಲೀಸರಿಗೆ ಒಪ್ಪಿಸಿದ ಸಾಹಸದ ಘಟನೆ ನಡೆದಿದೆ. ಬ್ಯಾಂಕ್‌ನ ಇ-ಸರ್ವೆಲೆನ್ಸ್ ತಂತ್ರಜ್ಞಾನದ ತಕ್ಷಣದ ಅಲರ್ಟ್​​ನಿಂದಾಗಿ ಬೂತ್‌ನಲ್ಲಿದ್ದ 16 ಲಕ್ಷ ರೂ.ಗೂ ಹೆಚ್ಚಿನ ಹಣ ಸುರಕ್ಷಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸೋಮವಾರ ತಡರಾತ್ರಿ ಸುಮಾರು 2.13ರ ಸುಮಾರಿಗೆ ನಾಗೌರ್‌ನಲ್ಲಿರುವ ಯುಸಿಒ ಬ್ಯಾಂಕ್ ಎಟಿಎಂನಲ್ಲಿ ಈ ಘಟನೆ ಸಂಭವಿಸಿದೆ. ಇಬ್ಬರು ಕಳ್ಳರು ಎಟಿಎಂ ಬೂತ್ ಪ್ರವೇಶಿಸಿ ಹಣವನ್ನು ಕದಿಯುವ ಉದ್ದೇಶದಿಂದ ಯಂತ್ರವನ್ನು ಹಾನಿಗೊಳಿಸಲು ಪ್ರಾರಂಭಿಸಿದ್ದರು.

Read original on TV9 Kannada Get the app

Licensed summary · LicensedSummary

Related briefs