TooBrief TooBrief

Home / Headlines

ಬೇಹುಗಾರಿಕೆ ಆರೋಪ, ಸಾಕ್ಷ್ಯಾಧಾರಗಳ ಕೊರತೆ, 22 ವರ್ಷಗಳ ಬಳಿಕ ಇಬ್ಬರು ಪಾಕ್​ ಪ್ರಜೆಗಳು

TV9 Kannada · DistrictNews · 2026-09-28

ಬೇಹುಗಾರಿಕೆ ಆರೋಪ, ಸಾಕ್ಷ್ಯಾಧಾರಗಳ ಕೊರತೆ, 22 ವರ್ಷಗಳ ಬಳಿಕ ಇಬ್ಬರು ಪಾಕ್​ ಪ್ರಜೆಗಳು

ಲಕ್ನೋ, ಸೆಪ್ಟೆಂಬರ್ 28: ಪಾಕಿಸ್ತಾನ ದ ಬೇಹುಗಾರಿಕಾ ಜಾಲದೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಉತ್ತರ ಪ್ರದೇಶದಲ್ಲಿ ಬಂಧಿತರಾಗಿದ್ದ ಇಬ್ಬರು ಪಾಕ್ ಪ್ರಜೆಗಳು 22 ವರ್ಷಗಳ ಬಳಿಕ ಖುಲಾಸೆಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ 2004 ರಲ್ಲಿ ದಾಖಲಾಗಿದ್ದ ಬಹುಚರ್ಚಿತ ಬೇಹುಗಾರಿಕೆ ಮತ್ತು ದೇಶದ್ರೋಹ ಪ್ರಕರಣವೊಂದು ಬರೋಬ್ಬರಿ 22 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ನ್ಯಾಯಾಲಯದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ. ಪ್ರಮುಖ ಆರೋಪಿಯಾಗಿದ್ದ ಜಮೀಲ್ ಅಹ್ಮದ್ ಎಂಬ ವ್ಯಕ್ತಿಯನ್ನು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ (ADJ-8) ರವಿಕಾಂತ್-II ಅವರ ನ್ಯಾಯಾಲಯವು ಸಕಲ ಆರೋಪಗಳಿಂದ ಮುಕ್ತಗೊಳಿಸಿ ಖುಲಾಸೆಗೊಳಿಸಿದೆ.

Read original on TV9 Kannada Get the app

Licensed summary · LicensedSummary

Related briefs