TooBrief TooBrief

Home / Headlines

ಭಾರತದ ಹೊಸ ‘ನ್ಯಾಷನಲ್ ಕ್ರಶ್’ ತಾನಿಯಾ ಮಿಶ್ರಾ; ಇಲ್ಲಿದೆ ಹಿನ್ನೆಲೆ

TV9 Kannada · DistrictNews · 2026-09-28

ಭಾರತದ ಹೊಸ ‘ನ್ಯಾಷನಲ್ ಕ್ರಶ್’ ತಾನಿಯಾ ಮಿಶ್ರಾ; ಇಲ್ಲಿದೆ ಹಿನ್ನೆಲೆ

ಬಾಲಿವುಡ್ ಹಾಗೂ ಮಾಡೆಲಿಂಗ್ ಲೋಕದಲ್ಲಿ ತಾನಿಯಾ ಮಿಶ್ರಾ ಹೆಸರು ಈಗ ಸಖತ್ ಸದ್ದು ಮಾಡುತ್ತಿದೆ. ತಮ್ಮ ಆಕರ್ಷಕ ಫೋಟೋಶೂಟ್ ಹಾಗೂ ಸೌಂದರ್ಯದಿಂದ ಅವರು ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ದಿಮ್ರಿ ಅವರಂತೆ ತಾನಿಯಾ ಕೂಡ ಭಾರತದ ಹೊಸ ‘ನ್ಯಾಷನಲ್ ಕ್ರಶ್’ ಎಂದು ಅಭಿಮಾನಿಗಳು ಕರೆಯುತ್ತಿದ್ದಾರೆ. ಅವರ ಗ್ಲಾಮರ್ ಲುಕ್ ವೀಕ್ಷಕರನ್ನು ಮೋಡಿ ಮಾಡಿದೆ. ತಾನಿಯಾ ಮಿಶ್ರಾ ಮೂಲತಃ ಬಿಹಾರದ ಗಯಾ ಮೂಲದವರಾಗಿದ್ದಾರೆ. ಅವರು ಪ್ರಸ್ತುತ ಮುಂಬೈನಲ್ಲಿ ನೆಲೆಸಿದ್ದಾರೆ. ಮಗಧ ವಿಶ್ವವಿದ್ಯಾಲಯದಿಂದ ಬಿ.ಕಾಮ್ ಪದವಿ ಪಡೆದಿರುವ ಇವರು ಮಾಡೆಲಿಂಗ್ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. ಫಿಲ್ಮ್‌ಫೇರ್, ಫೆಮಿನಾ ಮತ್ತು ಗೇಜಿಯಾ ನಿಯತಕಾಲಿಕೆಗಳ ಕವರ್ ಪೇಜ್‌ಗಳಲ್ಲಿ ಕಾಣಿಸಿಕೊಂಡು ಅವರು ಸೈ ಎನಿಸಿಕೊಂಡಿದ್ದಾರೆ.

Read original on TV9 Kannada Get the app

Licensed summary · LicensedSummary

Related briefs