TooBrief TooBrief

Home / Headlines

ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ! ಅರಣ್ಯ ಇಲಾಖೆಯ ವಿರುದ್ಧ

TV9 Kannada · DistrictNews · 2026-09-28

ಬೆಂಗಳೂರಿನಲ್ಲಿ ಆನೆ ದಾಳಿಗೆ ವಾಕಿಂಗ್​ಗೆ ತೆರಳಿದ್ದ ವೃದ್ಧ ಬಲಿ! ಅರಣ್ಯ ಇಲಾಖೆಯ ವಿರುದ್ಧ

ಬೆಂಗಳೂರು, ಸೆಪ್ಟೆಂಬರ್ 28: ನಗರದ ಮೈಸೂರು ರಸ್ತೆಯ ರಾಜರಾಜೇಶ್ವರಿ ಆಸ್ಪತ್ರೆ ಹಿಂಭಾಗದ ಅಂಚೆಪಾಳ್ಯದಲ್ಲಿ ಮುಂಜಾನೆ ಬೆಚ್ಚಿಬೀಳಿಸುವ ಘಟನೆ ನಡೆದಿದೆ. ಎಂದಿನಂತೆ ವಾಕಿಂಗ್ ತೆರಳಿದ್ದ ಕೂಲಿ ಕಾರ್ಮಿಕ ನಾಗರಾಜ್ (60) ಎಂಬುವವರ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿದ್ದು, ಸೊಂಡಿಲಿನಿಂದ ಎತ್ತಿ ಎಸೆದ ಪರಿಣಾಮ ಅವರು ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.ಬನ್ನೇರುಘಟ್ಟದಿಂದ ಕಗ್ಗಲೀಪುರ ಅರಣ್ಯ ವಲಯದ ಮೂಲಕ ಈ ಆನೆ ನಾಡಿಗೆ ಬಂದಿರಬಹುದು ಎಂದು ಶಂಕಿಸಲಾಗಿದ್ದು, ಅರಣ್ಯಾಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಮಧ್ಯೆ, ಆರ್‌ಆರ್ ಆಸ್ಪತ್ರೆ ಆವರಣದಲ್ಲಿ ಮೃತರ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ.

Read original on TV9 Kannada Get the app

Licensed summary · LicensedSummary

Related briefs