TV9 Kannada · DistrictNews · 2026-09-30
ಬೆಳಗಾವಿ ಪಾಲಿಕೆ ಸಭೆಯಲ್ಲಿ ವಂದೇ ಮಾತರಂ ವಿವಾದ: ಬಿಜೆಪಿ-ಕಾಂಗ್ರೆಸಿಗರ ನಡುವೆ ವಾಗ್ವಾದ
ಬೆಳಗಾವಿ, ಸೆಪ್ಟೆಂಬರ್ 30: ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ವಂದೇ ಮಾತರಂ ಗೀತೆ ಗಾಯನ ವಿಚಾರವಾಗಿ ತೀವ್ರ ಗದ್ದಲ ನಡೆದಿದೆ. ಸಭೆಯ ಆರಂಭದಲ್ಲಿ ಮೊದಲು ನಾಡಗೀತೆ ಪ್ಲೇ ಮಾಡಲಾಯಿತು. ಬಳಿಕ ವಂದೇ ಮಾತರಂ ಗೀತೆಯನ್ನು ಹಾಡಲಾಗಿತ್ತು. ಆದರೆ, ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಎರಡು ಚರಣಗಳನ್ನು ಮಾತ್ರ ಪ್ಲೇ ಮಾಡಲಾಗಿತ್ತು. ಈ ನಿರ್ಧಾರಕ್ಕೆ ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿ, ಸಭೆಯಲ್ಲಿ ಪೂರ್ಣ ವಂದೇ ಮಾತರಂ ಗೀತೆಯನ್ನು ಹಾಡಿದರು. ಹೀಗಾಗಿ ಆಡಳಿತಾರೂಢ ಬಿಜೆಪಿ ಸದಸ್ಯರ ನಡೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಇದೇ ವಿಚಾರಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಸಭೆ ಸಾಕ್ಷಿಯಾಯಿತು.
Read original on TV9 Kannada Get the app
Licensed summary · LicensedSummary
Related briefs
- Divya Khossla questions Komal Rani’s sindoor at Lalbaugcha Raja: ‘Whom are
- Akshay Kumar shares his 4 S philosophy for a good life: ‘Sukh, shanti, seva
- ఆధార్ కార్డు ద్వారా డబ్బులు విత్ డ్రా చేస్తున్నారా..? బీ కేర్ఫుల్.. ఈ
- Johnny Depp returns to the big screen as Ebenezer Scrooge in Ti West’s spooky
- ನಾಳೆ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ; ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 3