TV9 Kannada · DistrictNews · 2026-10-01
ನಾಳೆ ಚುನಾವಣಾ ಆಯೋಗದ ವಿರುದ್ಧ ಪ್ರತಿಭಟನೆ; ಜ್ಞಾನೇಶ್ ಕುಮಾರ್ ರಾಜೀನಾಮೆ ಸೇರಿದಂತೆ 3
ಮುಂಬೈ, ಅಕ್ಟೋಬರ್ 1: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಕಾಕ್ರೋಚ್ ಜನತಾ ಪಾರ್ಟಿ’ (ಸಿಜೆಪಿ) ಅಕ್ಟೋಬರ್ 2ರಂದು (ನಾಳೆ) ಮುಂಬೈನಲ್ಲಿ ಬೃಹತ್ ಪ್ರತಿಭಟನೆ ನಡೆಸಲಿದೆ. ಭಾರತೀಯ ಚುನಾವಣಾ ಆಯೋಗದ ಆಂತರಿಕ ಭಿನ್ನಾಭಿಪ್ರಾಯಗಳ ಕುರಿತು ಮಾಧ್ಯಮ ವರದಿಗಳು ಹೊರಬಿದ್ದ ಬೆನ್ನಲ್ಲೇ ಈ ಪ್ರತಿಭಟನೆಯನ್ನು ಘೋಷಿಸಲಾಗಿದೆ. ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂಬ ಪ್ರಮುಖ ಆಗ್ರಹದ ಜೊತೆಗೆ, ಸಿಜೆಪಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಮತ್ತಷ್ಟು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಸಿಜೆಪಿಯ ಪ್ರಮುಖ ಬೇಡಿಕೆಗಳು: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ಕಾನೂನುಬದ್ಧ ಅಪರಾಧಿಕ ಪ್ರಕ್ರಿಯೆಗಳನ್ನು ಪ್ರಾರಂಭಿಸಬೇಕು.
Read original on TV9 Kannada Get the app
Licensed summary · LicensedSummary
Related briefs
- UP Police Working Like BJP Workers, Says Akhilesh Yadav, Terms Current Rule a
- Divya Khossla questions Komal Rani’s sindoor at Lalbaugcha Raja: ‘Whom are
- Akshay Kumar shares his 4 S philosophy for a good life: ‘Sukh, shanti, seva
- ఆధార్ కార్డు ద్వారా డబ్బులు విత్ డ్రా చేస్తున్నారా..? బీ కేర్ఫుల్.. ఈ
- Johnny Depp returns to the big screen as Ebenezer Scrooge in Ti West’s spooky