TooBrief TooBrief

Home / Headlines

ಬಿಗ್ ಬಾಸ್‌ ವೇದಿಕೆಯಲ್ಲಿ ಸಿಎಂ ವಿಜಯ್​ಗೆ ಟಾಂಗ್ ಕೊಟ್ಟ ವಿಜಯ್ ಸೇತುಪತಿ?

TV9 Kannada · Entertainment · 2026-09-15

ಬಿಗ್ ಬಾಸ್‌ ವೇದಿಕೆಯಲ್ಲಿ ಸಿಎಂ ವಿಜಯ್​ಗೆ ಟಾಂಗ್ ಕೊಟ್ಟ ವಿಜಯ್ ಸೇತುಪತಿ?

ಖ್ಯಾತ ನಟ ವಿಜಯ್ ಸೇತುಪತಿ ಬಿಗ್ ಬಾಸ್ ತಮಿಳು ಸೀಸನ್ 10ರ ಇತ್ತೀಚಿನ ಸಂಚಿಕೆಯಲ್ಲಿ ನೀಡಿದ ಹೇಳಿಕೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಬಿಗ್ ಬಾಸ್ ಸ್ಪರ್ಧಿ ಜೊತೆ ಲೀಡರ್​ಶಿಪ್ ಕುರಿತು ವಿಜಯ್ ಸೇತುಪತಿ ಮಾತನಾಡಿದ್ದರು. ಈ ವೇಳೆ ಜವಾಬ್ದಾರಿಗಳು ಮತ್ತು ಭರವಸೆಗಳ ಬಗ್ಗೆ ಸೇತುಪತಿ ಪ್ರಸ್ತಾಪಿಸಿದ್ದರು. ಕಷ್ಟದ ಸಂದರ್ಭಗಳಲ್ಲಿ ನಾಯಕನಾದವನು ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ವಿವರಿಸಿದ್ದರು. ಇದನ್ನು ಕೆಲವರು ತಪ್ಪಾಗಿ ಅರ್ಥೈಸಿದ್ದಾರೆ. ‘ವಿಚಾರಿಸದೆ ಆತುರದಲ್ಲಿ ಭರವಸೆ ನೀಡುವುದು ಸರಿಯಲ್ಲ. ಸಮಸ್ಯೆಗಳು ಎದುರಾದಾಗ ಓಡಿಹೋಗುವುದು ನಿಜವಾದ ನಾಯಕತ್ವವಲ್ಲ. ವಿಪಕ್ಷಗಳ ಮೇಲೆ ಗೂಬೆ ಕೂರಿಸುವುದು ನಾಯಕನ ಲಕ್ಷಣವಲ್ಲ’ ಎಂದು ಸ್ಪರ್ಧಿಗೆ ವಿವರಿಸಿದರು.

Read original on TV9 Kannada Get the app

Licensed summary · LicensedSummary

Related briefs