TooBrief TooBrief

Home / Headlines

Video: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್‌ ನೀಡಿ ನಗು ಮೂಡಿಸಿದ ಬಾಸ್

TV9 Kannada · DistrictNews · 2026-09-27

Video: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್‌ ನೀಡಿ ನಗು ಮೂಡಿಸಿದ ಬಾಸ್

ಕೆಲಸ ಮಾಡುವ ಸ್ಥಳದಲ್ಲಿ ಬಾಸ್ ವರ್ತನೆಯು ಬಹಳ ಮುಖ್ಯವಾಗುತ್ತದೆ. ಕಂಪನಿ ( company ) ಉದ್ಯೋಗಿಗಳನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ ಉದ್ಯೋಗಿಗಳ ಕೆಲಸ ನಿರ್ಧಾರವಾಗುತ್ತದೆ. ಹೀಗಿರುವಾಗ ಯುಎಇ ಮೂಲದ ಕಂಪನಿಯೊಂದರಲ್ಲಿ ಉದ್ಯೋಗಿಗಳಿಗೆ ಬಾಸ್ ನೀಡಿದ ಸರ್ಪ್ರೈಸ್ ಗಿಫ್ಟ್ ಎಲ್ಲರ ಗಮನ ಸೆಳೆಯುತ್ತಿದೆ. ಚಾಕೊಲೇಟ್ ಯಿಂದ ಪ್ರಾರಂಭವಾಗಿ ಐಫೋನ್ ವರೆಗೆ ಈ ಗಿಫ್ಟ್ ಗೇಮ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಉದ್ಯೋಗಿಗಳಿಗೆ ಕಂಪನಿಯಿಂದ ಸರ್ಪ್ರೈಸ್ ಗಿಫ್ಟ್ ಹಸೀನಾ ನಿಶಾದ್ ( haseena_nishad ) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ಕ್ಲಿಪಿಂಗ್ ನಲ್ಲಿ ಉದ್ಯೋಗಿಗಳು ಮೇಜಿನ ಮೇಲಿದ್ದ ಪ್ಯಾಕ್ ಮಾಡಿದ ಗಿಫ್ಟ್ ಬಾಕ್ಸ್‌ಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಉದ್ಯೋಗಿಗಳು ಬಾಕ್ಸ್ ತೆರೆದಾಗ ಕೆಲವರಿಗೆ ಐಫೋನ್ ಸಿಕ್ಕಿದೆ.

Read original on TV9 Kannada Get the app

Licensed summary · LicensedSummary

Related briefs