TooBrief TooBrief

Home / Headlines

ಗದಗದಲ್ಲಿ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು

TV9 Kannada · DistrictNews · 2026-09-27

ಗದಗದಲ್ಲಿ ಕೆಆರ್​ಡಿಎಲ್​ ಎಇಇ ಪತ್ರ ಬರೆದು ನಾಪತ್ತೆ ವಿಚಾರಕ್ಕೆ ಸಿಎಂ ರಿಯಾಕ್ಷನ್ ಹೀಗಿತ್ತು

ಬೆಂಗಳೂರು, ಸೆಪ್ಟೆಂಬರ್ 27: ಗದಗ ಜಿಲ್ಲೆಯಲ್ಲಿ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ (ಎಇಇ) ಒಬ್ಬರು ಕಾಣೆಯಾಗಿರುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಕಾಣೆಯಾದ ಎಇಇ ವಿರುದ್ಧ ಸ್ಥಳೀಯ ಬಿಜೆಪಿ ಶಾಸಕರೊಬ್ಬರು ಸಂಪೂರ್ಣ ತನಿಖೆಗೆ ಆಗ್ರಹಿಸಿದ್ದಾರೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಅಧಿಕಾರಿಯು ಕಾನೂನುಬದ್ಧವಾಗಿ ಕೆಲಸ ಮಾಡುತ್ತಿರಲಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಸೈಟ್‌ಗಳಿಗೆ ಭೇಟಿ ನೀಡದಿರುವುದು ಹಾಗೂ ಕಾಮಗಾರಿಗಳ ವಿಡಿಯೋ ದಾಖಲಾತಿ ಮಾಡದಿರುವಂತಹ ಕರ್ತವ್ಯ ಲೋಪಗಳ ಆರೋಪಗಳು ಇವರ ಮೇಲಿವೆ. ಈ ಬಗ್ಗೆ ನಾಯಕ್ ಎಂಬುವರು ಎರಡು-ಮೂರು ಬಾರಿ ದೂರು ನೀಡಿದ್ದರು.

Read original on TV9 Kannada Get the app

Licensed summary · LicensedSummary

Related briefs