TV9 Kannada · DistrictNews · 2026-09-28
ಉಪ್ಪಿನ ಬಳಿಕ ಸಕ್ಕರೆ ಬಳಕೆ ಪ್ರಮಾಣಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ: ಕಾರಣ
ಬೆಂಗಳೂರು, ಸೆಪ್ಟೆಂಬರ್ 28: ಉಪ್ಪಿನ ಬಳಿಕ ಈಗ ಸಕ್ಕರೆ ಬಳಕೆ ಪ್ರಮಾಣಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಅತಿಯಾದ ಸಕ್ಕರೆ ಸೇವನೆಯಿಂದ ಹೃದ್ರೋಗ ಸಮಸ್ಯೆ, ಬೊಜ್ಜು, ಮಧುಮೇಹ, ಫ್ಯಾಟಿ ಲಿವರ್ ಸಮಸ್ಯೆಗಳ ಅಪಾಯ ಹೆಚ್ಚಳ ಹಿನ್ನಲೆ ಸಕ್ಕರೆ ಬಳಕೆಗೆ ರಾಜ್ಯದಲ್ಲಿ ಮೊದಲ ಬಾರಿಗೆ ಮಾನದಂಡ ರೂಪಿಸಲು ಆಹಾರ ಇಲಾಖೆ ಪ್ಲ್ಯಾನ್ ಮಾಡಿದೆ. ಸಿಹಿ ಪದಾರ್ಥ ಸೇರಿ ಸಕ್ಕರೆ ಬಳಸಿ ತಯಾರಿಸುವ ಆಹಾರ ಪದಾರ್ಥಗಳಲ್ಲಿ ಗರಿಷ್ಠ ಇಂತಿಷ್ಟೇ ಸಕ್ಕರೆ ಬಳಕೆ ಮಾಡಬೇಕು ಎಂದು ಉತ್ಪಾದಕರಿಗೆ ಮಾರ್ಗಸೂಚಿ ನೀಡಲು ಸಿದ್ಧತೆ ನಡೆದಿದೆ. ಆ ಮೂಲಕ ಸಿಹಿ ತಿಂಡಿ, ಪಾನೀಯ, ಪ್ಯಾಕೇಜ್ಡ್ ಆಹಾರಗಳಲ್ಲಿ ಬಳಸುವ ಸಕ್ಕರೆ ಪ್ರಮಾಣದ ಮೇಲೆ ನಿಗಾ ವಹಿಸಲು ಸರ್ಕಾರ ಮುಂದಾಗಿದೆ.
Read original on TV9 Kannada Get the app
Licensed summary · LicensedSummary
Related briefs
- Supreme Court: ৮ অক্টোবরের মধ্যে সিদ্ধান্ত নিতে হবে, ঋত-শিবিরের ১০ বিধায়কের
- Amitabh Bachchan: ‘অমিতাভের সঙ্গে দেখা করতে এসেছি!’, কাসভের চাঞ্চল্যকর দাবি
- Ranbir Kapoor net worth: আড়াইশো কোটির বাংলো, গ্যারাজে সাড়ে তিন কোটির গাড়ি!
- Heavy rain triggered landslides and river overflows in parts of Nepal
- Sensex tumbles 1,000 points: Why markets are falling despite strong growth