TV9 Kannada · DistrictNews · 2026-09-27
ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ವದಂತಿ: ರೊಚ್ಚಿಗೆದ್ದ ವಿದ್ಯಾರ್ಥಿಗಳಿಂದ ಪಂಜಾಬ್‌ನ
ಅಮೃತಸರ, ಸೆಪ್ಟೆಂಬರ್ 27: ಪಂಜಾಬ್‌ನ ಫಾಗ್ವಾರಾದಲ್ಲಿರುವ ಪ್ರಸಿದ್ಧ ಲವ್ಲಿ ಪ್ರೊಫೆಷನಲ್ ವಿಶ್ವವಿದ್ಯಾಲಯದ (LPU) ಕ್ಯಾಂಪಸ್‌ನಲ್ಲಿ ಭಾನುವಾರ ಬೆಳಗಿನ ಜಾವ ಭಾರಿ ಗದ್ದಲ ನಡೆದಿದೆ. ಹೊರಗಿನ ವ್ಯಕ್ತಿಯೊಬ್ಬ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂಬ ದೃಢೀಕರಿಸದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಕಾಳ್ಗಿಚ್ಚಿನಂತೆ ಹರಡಿದ ಬೆನ್ನಲ್ಲೇ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಆಕ್ರೋಶ ಹೊರಹಾಕಿದ್ದಾರೆ. ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ: ಪೊಲೀಸರು ಮತ್ತು ಪ್ರತ್ಯಕ್ಷದರ್ಶಿಗಳ ಪ್ರಕಾರ, ಮಧ್ಯರಾತ್ರಿ ಸುಮಾರು 2 ಗಂಟೆಯ ಸುಮಾರಿಗೆ ಬಾಲಕಿಯರ ಹಾಸ್ಟೆಲ್ ಬಳಿ ಜಮಾಯಿಸಿದ ವಿದ್ಯಾರ್ಥಿನಿಯರು ಆಡಳಿತ ಮಂಡಳಿಯ ಭದ್ರತಾ ಲೋಪದ ವಿರುದ್ಧ ಪ್ರತಿಭಟನೆ ಆರಂಭಿಸಿದರು. ನೋಡನೋಡುತ್ತಿದ್ದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಗೆ ಸೇರ್ಪಡೆಗೊಂಡು ಕ್ಯಾಂಪಸ್‌ನಲ್ಲಿ ವಿಧ್ವಂಸಕ ಕೃತ್ಯ ನಡೆಸಿದರು. ಕಿಟಕಿ ಗಾಜುಗಳು, ಕುಂಡಗಳು ಮತ್ತು ಪೀಠೋಪಕರಣಗಳನ್ನು ಪುಡಿಮಾಡಲಾಯಿತು.
Read original on TV9 Kannada Get the app
Licensed summary · LicensedSummary
Related briefs
- Bid to delete 4.6k voters in 2 Karnataka assembly seats
- नुसते दौरे करण्यापेक्षा मदत घेऊन शेतकऱ्यांकडे जा; संजय राऊतांचा विरोधकांना सल्ला
- Video: ಉದ್ಯೋಗಿಗಳಿಗೆ ಸರ್ಪ್ರೈಸ್ ಆಗಿ ಐಫೋನ್ ನೀಡಿ ನಗು ಮೂಡಿಸಿದ ಬಾಸ್
- Mushtaq Khan death: ‘কোটিপতিদের পার্টিতে যাওয়ার সময় আছে, আর…’, মুস্তাকের
- கூட்டம் தொடங்கும் முன்பே உள்ளே புகுந்த போலீஸ்.. கரப்பான் பூச்சி ஜனதா கட்சி