TooBrief TooBrief

Home / Headlines

ಕರ್ನಾಟಕದ ವಾಯು ಗುಣಮಟ್ಟ: ರಾಜ್ಯದ ಹಲವು ನಗರಗಳ ವಾಯುಗುಣಮಟ್ಟ ಇಂದು ಉತ್ತಮ ಸ್ಥಿತಿಯಲ್ಲಿ!

TV9 Kannada · DistrictNews · 2026-09-28

ಕರ್ನಾಟಕದ ವಾಯು ಗುಣಮಟ್ಟ: ರಾಜ್ಯದ ಹಲವು ನಗರಗಳ ವಾಯುಗುಣಮಟ್ಟ ಇಂದು ಉತ್ತಮ ಸ್ಥಿತಿಯಲ್ಲಿ!

ಬೆಂಗಳೂರು, ಸೆಪ್ಟೆಂಬರ್ 28: ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಸೂಚ್ಯಂಕ ಸ್ಥಿರವಾಗಿದ್ದು, ಬಹುತೇಕ ಕಡೆಗಳಲ್ಲಿ ಸಾಧಾರಣ ಹಾಗೂ ಉತ್ತಮ ಶ್ರೇಣಿಯಲ್ಲಿ ದಾಖಲಾಗಿದೆ. ಸಿಲಿಕಾನ್ ಸಿಟಿಯಲ್ಲಿ ವಾಹನ ದಟ್ಟಣೆ ಹೆಚ್ಚಿದ್ದರೂ ಸಹ ಇತ್ತೀಚಿನ ಮಳೆಯ ಪ್ರಭಾವದಿಂದಾಗಿ ವಾಯು ಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ತಲುಪಿಲ್ಲ. ಬೆಂಗಳೂರಿನಲ್ಲಿ ಇಂದಿನ ವಾಯು ಗುಣಮಟ್ಟ ಇಂದು ಮುಂಜಾನೆಯ ವರದಿಗಳ ಪ್ರಕಾರ ಬೆಂಗಳೂರಿನ ಸರಾಸರಿ ಎಕ್ಯೂಐ 60 ರಿಂದ 78 ರಷ್ಟಿದ್ದು, ಸಾಧಾರಣ ವಿಭಾಗಕ್ಕೆ ಸೇರಿದೆ. ನಗರದ ಹೆಬ್ಬಾಳ, ಸಿಲ್ಕ್ ಬೋರ್ಡ್ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶಗಳಲ್ಲಿ PM2.5 ಮತ್ತು PM10 ಧೂಳಿನ ಕಣಗಳ ಪ್ರಮಾಣ ಕೊಂಚ ಹೆಚ್ಚಿದ್ದು, ಎಕ್ಯೂಐ 75 ರಿಂದ 85 ರ ಆಸುಪಾಸಿನಲ್ಲಿದೆ.

Read original on TV9 Kannada Get the app

Licensed summary · LicensedSummary

Related briefs