TV9 Kannada · DistrictNews · 2026-09-27
ಬೇಕೋ ಬೇಡ್ವೋ ಗ್ಯಾರಂಟಿ ಕೊಟ್ಟಿದ್ದೇವೆ, ನಿಲ್ಲಿಸಿದ್ರೆ ಗಲಾಟೆ ಮಾಡ್ತಾರೆ – ಸಮಸ್ಯೆಯಲ್ಲಿ
ರಾಮನಗರ, ಸೆಪ್ಟೆಂಬರ್ 27: ‘ಉಚಿತ ಗ್ಯಾರಂಟಿ ಯೋಜನೆಗಳಿಂದ ಸರ್ಕಾರ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುವಂತಾಗಿದೆ’ ಎಂದು ಸಚಿವ ಹೆಚ್ಸಿ ಬಾಲಕೃಷ್ಣ ಹೇಳಿದ್ದಾರೆ. ರಾಮನಗರದಲ್ಲಿ ದಿವ್ಯಾಂಗರ ಪ್ರತಿಭಟನೆ ನಿಮಿತ್ತ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಮಾತನಾಡಿದ ಅವರು, ‘ಬೇಕೋ ಬೇಡ್ವೋ ನಾವು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಆದರೆ, ಈಗ ರಾಜ್ಯದಲ್ಲಿ ಬರಗಾಲ ಬಂದಿದೆ. ರೈತರಿಗೆ ಹಣ ನೀಡಬೇಕು. ಕೊಡದಿದ್ದರೆ ಅವರೂ ಪ್ರತಿಭಟನೆ ಮಾಡುತ್ತಾರೆ. ಒಂದು ವೇಳೆ ಗ್ಯಾರಂಟಿಗಳನ್ನು ನಿಲ್ಲಿಸಿದರೆ, ಜನರು ಪ್ರತಿಭಟನೆ ನಡೆಸುತ್ತಾರೆ. ಗ್ಯಾರಂಟಿಗಳು ಇಲ್ಲದಿದ್ರೆ ನಮಗೆ ಇದೆಲ್ಲ ಸಮಸ್ಯೆಯೇ ಆಗುತ್ತಿರಲಿಲ್ಲ, ಹೇಗೋ ನಿರ್ವಹಿಸುತ್ತಿದ್ದೆವು. ಈಗ ಈ ಸಮಸ್ಯೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದೇವೆ’ ಎಂದು ಅಳಲು ತೋಡಿಕೊಂಡಿದ್ದಾರೆ. ‘ಗ್ಯಾರಂಟಿ ಯೋಜನೆಗಳು ಇಲ್ಲದಿದ್ದರೆ ಇವೆಲ್ಲಾ ಸಮಸ್ಯೆಗಳೇ ಆಗುತ್ತಿರಲಿಲ್ಲ’ ಎಂದು ಸಚಿವರು ಅಭಿಪ್ರಾಯಪಟ್ಟಿದ್ದಾರೆ.
Read original on TV9 Kannada Get the app
Licensed summary · LicensedSummary
Related briefs
- UPI-তে MDR চালু হচ্ছে ১৫ অক্টোবর! ৮০০০ টাকার বিল ৪ বার ২০০০ টাকা করে
- West Bengal Live Updates: ‘মিশন বাংলা’, আজ রাজ্যে আসছেন নিতিন নবীন
- Cough Syrup Seized: থরে থরে সাজানো বোতল, বাগুইআটির গোডাউনে কোটি টাকার ‘বেআইনি
- ಹ “ ” is an abbreviation of the English word for ‘fear
- 27 ஆண்டுகள் கடின உழைப்பு! 59 வயதில் அரசு ஆசிரியர் பணி! கலக்கிய விஜயகுமார் சர்மா!