TooBrief TooBrief

Home / Headlines

ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು

TV9 Kannada · DistrictNews · 2026-09-28

ಸಿಬಿಡಿಟಿ ಮಹತ್ವದ ಘೋಷಣೆ: ಟ್ಯಾಕ್ಸ್ ಆಡಿಟ್ ರಿಪೋರ್ಟ್ ಮತ್ತು ಇನ್ಕಮ್ ರಿಟರ್ನ್ ಸಲ್ಲಿಸಲು

ನವದೆಹಲಿ, ಸೆಪ್ಟೆಂಬರ್ 28: ಅಕ್ಟೋಬರ್ 31ಕ್ಕೆ ಐಟಿ ರಿಟರ್ನ್ಸ್ ಫೈಲ್ ಮಾಡಲು ಡೆಡ್​ಲೈನ್ ಹೊಂದಿರುವ ಕಾರ್ಪೊರೇಟ್ ಸಂಸ್ಥೆಗಳು ಹಾಗು ನಿರ್ದಿಷ್ಟ ತೆರಿಗೆದಾರರಿಗೆ ನಿರಾಳ ತರುವ ಸುದ್ದಿ ಬಂದಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಈ ಡೆಡ್​ಲೈನ್ ಅನ್ನು ಒಂದು ತಿಂಗಳು ಮುಂದಕ್ಕೆ ಹಾಕಿದೆ. ಇನ್ಕಮ್ ರಿಟರ್ನ್ಸ್ ಸಲ್ಲಿಸುವ ಅಂತಿಮ ದಿನಾಂಕವನ್ನು ಅಕ್ಟೋಬರ್ 31ರಿಂದ ನವೆಂಬರ್ 21ಕ್ಕೆ ವಿಸ್ತರಿಸಲಾಗಿದೆ. ಆದಾಯ ತೆರಿಗೆ ಕಾಯ್ದೆ ಅಡಿ ಟ್ಯಾಕ್ಸ್ ಆಡಿಟಿಂಗ್ ಮಾಡಿಸಬೇಕಾದ ತೆರಿಗೆದಾರರಿಗೆ ರಿಟರ್ನ್ಸ್ ಸಲ್ಲಿಸಲು ನವೆಂಬರ್ 21ರವರೆಗೂ ಕಾಲಾವಕಾಶ ಸಿಕ್ಕಂತಾಗಿದೆ. ಟ್ಯಾಕ್ಸ್ ಆಡಿಟ್ ರಿಪೋರ್ಟ್​ಗಳನ್ನು (Tax Audit Reports) ಸಲ್ಲಿಸುವ ಡೆಡ್​ಲೈನ್ ಅನ್ನೂ ವಿಸ್ತರಿಸಲಾಗಿದೆ. ಆಡಿಟ್ ರಿಪೋರ್ಟ್​ಗಳನ್ನು ಸೆಪ್ಟೆಂಬರ್ 30ಕ್ಕೆ ಸಲ್ಲಿಸಬೇಕಿತ್ತು. ಅದನ್ನು ಅಕ್ಟೋಬರ್ 21ರವರೆಗೂ ವಿಸ್ತರಿಸಲಾಗಿದೆ.

Read original on TV9 Kannada Get the app

Licensed summary · LicensedSummary

Related briefs