TooBrief TooBrief

Home / Headlines

ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ

TV9 Kannada · DistrictNews · 2026-09-27

ಚಿತ್ರರಂಗದಲ್ಲಿ ಮೂರು ದಶಕ: ಕಿಚ್ಚನಿಗೆ ರಿಷಬ್ ಶುಭಾಶಯ

ಕಿಚ್ಚ ಸುದೀಪ್ (Kichcha Sudeepa) ಅವರು ಚಿತ್ರರಂಗಕ್ಕೆ ಕಾಲಿರಿಸಿ 30 ವರ್ಷಗಳಾಗಿವೆ. ಇದೊಂದು ಅಪರೂಪದ ಸಾಧನೆ. ಕಳೆದ 30 ವರ್ಷಗಳಿಂದಲೂ ನಾಯಕನಾಗಿ ಮಿಂಚುತ್ತಿದ್ದಾರೆ ಸುದೀಪ್. ಸುದೀಪ್ ಅವರು ಮೂರು ದಶಕ ಪೂರ್ಣಗೊಳಿಸಿದ್ದನ್ನು ಬಿಗ್​​ಬಾಸ್ ವೇದಿಕೆಯಲ್ಲಿ ಸಂಭ್ರಮಿಸಲಾಗಿದೆ. ಮೋಹನ್​​ಲಾಲ್, ಸಲ್ಮಾನ್ ಖಾನ್, ನಾಗಾರ್ಜುನ, ಸೌರವ್ ಗಂಗೂಲಿ ಇನ್ನೂ ಹಲವು ದಿಗ್ಗಜರು ಸುದೀಪ್ ಅವರು 30 ವರ್ಷ ಚಿತ್ರರಂಗದಲ್ಲಿ ಪೂರ್ಣಗೊಳಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಅವರು ಮಾತ್ರವೇ ಅಲ್ಲದೆ ಕನ್ನಡದ ಸ್ಟಾರ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಸಹ ವಿಶೇಷವಾಗಿ ಕರೆ ಮಾಡಿ ಸುದೀಪ್ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಸುದೀಪ್ ಸಹ ರಿಷಬ್ ಅವರಿಗೆ ಧನ್ಯವಾದ ಹೇಳುವ ಜೊತೆಗೆ ಮುಂದಿನ ಸಿನಿಮಾಗಳಿಗೆ ಶುಭಾಶಯ ತಿಳಿಸಿದ್ದಾರೆ.

Read original on TV9 Kannada Get the app

Licensed summary · LicensedSummary

Related briefs