TooBrief TooBrief

Home / Headlines

ತೊದಲು ನುಡಿಯಲ್ಲೇ ಅಚ್ಚರಿ ಮೂಡಿಸಿದ ಪುಟಾಣಿ: ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್

TV9 Kannada · DistrictNews · 2026-09-27

ತೊದಲು ನುಡಿಯಲ್ಲೇ ಅಚ್ಚರಿ ಮೂಡಿಸಿದ ಪುಟಾಣಿ: ವೈಷ್ಣವಿಯ ಟ್ಯಾಲೆಂಟ್​ಗೆ ಮನಸೋತ ಇಂಡಿಯಾ ಬುಕ್

ಬಾಗಲಕೋಟೆ, ಸೆಪ್ಟೆಂಬರ್​​ 27: ‘ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬ ಗಾದೆಗೆ ತಕ್ಕಂತೆ, ಬಾಗಲಕೋಟೆಯ ನಾಲ್ಕು ವರ್ಷದ ಬಾಲಕಿ ವೈಷ್ಣವಿ ಪ್ರದೀಪ್ ಕಡಗದ ತನ್ನ ಅಸಾಧಾರಣ ಪ್ರತಿಭೆಯಿಂದ ಎಲ್ಲರ ಗಮನ ಸೆಳೆದಿದ್ದಾಳೆ. ತೊದಲು ನುಡಿಯಲ್ಲೇ ಕನ್ನಡ, ಇಂಗ್ಲಿಷ್ ವರ್ಣಮಾಲೆಗಳು, 1 ರಿಂದ 120 ರವರೆಗಿನ ಅಂಕಿ ಸಂಖ್ಯೆಗಳು (ಹಿಮ್ಮುಖವಾಗಿ), ಶ್ಲೋಕಗಳು, ವಚನಗಳು, ಮೂರು ಪ್ರಾಸಗಳು, 14 ಹಿಂದಿ ಪದಗಳು ಮತ್ತು 15 ಕನ್ನಡ ಪದಗಳನ್ನು ನಿರರ್ಗಳವಾಗಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದಾಳೆ. ಮಗಳ ಪ್ರತಿಭೆ ಕಂಡು ತಂದೆ ಪ್ರದೀಪ್ ಹಾಗೂ ತಾಯಿ ಪ್ರಿಯಾಂಕಾ ಕಡಗದ ವಿಡಿಯೊ ಮಾಡಿ, ಜುಲೈ ತಿಂಗಳಲ್ಲಿ ಆನ್‌ಲೈನ್ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ಸಲ್ಲಿಸಿದ್ದರು.

Read original on TV9 Kannada Get the app

Licensed summary · LicensedSummary

Related briefs