TV9 Kannada · DistrictNews · 2026-09-30
ಮಾಜಿ ಆಟಗಾರನನ್ನೇ ಬೌಲಿಂಗ್ ಕೋಚ್ ಆಗಿ ನೇಮಿಸಿದ ಸಿಎಸ್‌ಕೆ
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ಫ್ರಾಂಚೈಸಿಗಳಲ್ಲಿ ಒಂದಾದ ಚೆನ್ನೈ ಸೂಪರ್ ಕಿಂಗ್ಸ್ ಮುಂಬರುವ 2027ರ ಸೀಸನ್‌ಗಾಗಿ ತನ್ನ ಸಪೋರ್ಟ್ ಸ್ಟಾಫ್‌ಗಳನ್ನು ಸಂಪೂರ್ಣವಾಗಿ ಪುನರ್ರಚಿಸುತ್ತಿದೆ. ಇತ್ತೀಚೆಗಷ್ಟೇ ದಿಗ್ಗಜ ವೇಗಿ ಝಹೀರ್ ಖಾನ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಿದ್ದ ಸಿಎಸ್‌ಕೆ, ಇದೀಗ ಝಹೀರ್ ಅವರ ಸಲಹೆಯಂತೆ ಮಾಜಿ ವೇಗಿ ಮೊಹಿತ್ ಶರ್ಮಾ ಅವರನ್ನು ನೂತನ ಬೌಲಿಂಗ್ ಕೋಚ್ ಆಗಿ ಆಯ್ಕೆ ಮಾಡಿದೆ. ದೀರ್ಘಕಾಲ ಸಿಎಸ್‌ಕೆ ಕೋಚ್ ಆಗಿದ್ದ ಸ್ಟೀಫನ್ ಫ್ಲೆಮಿಂಗ್ ನಿರ್ಗಮನದ ಬಳಿಕ, ಹೊಸ ಸಪೋರ್ಟ್ ಸ್ಟಾಫ್ ಅನ್ನು ಆಯ್ಕೆ ಮಾಡುವ ಸಂಪೂರ್ಣ ಜವಾಬ್ದಾರಿಯನ್ನು ಝಹೀರ್ ಖಾನ್ ಅವರಿಗೆ ನೀಡಿಲಾಗಿದೆ.
Read original on TV9 Kannada Get the app
Licensed summary · LicensedSummary
Related briefs
- Asian Games 2026: India Win Mixed Compound Archery Gold, Beat Korea In Shoot Off
- Ketan Agarwal case ‘watertight’; technical, witness evidence establish chain’
- INDIA bloc meeting: ইন্ডি জোটের বৈঠকে মমতা-অভিষেকের সঙ্গে এবার কল্যাণ, কী কী
- 68% fall in donations: AAP looks towards its MLAs, MPs as Punjab goes
- As Trump calls Sundar Pichai a ‘monster’, Google CEO responds