TooBrief TooBrief

Home / Headlines

ಕುತೂಹಲ‌ ಮೂಡಿಸಿದ ಕೌಶಿಕ್, ಅಶ್ವಿತಾ ನಟನೆಯ ‘ಮಿಸ್‌ಮ್ಯಾಚ್’ ಸಿನಿಮಾ ಟೀಸರ್

TV9 Kannada · DistrictNews · 2026-10-01

ಕುತೂಹಲ‌ ಮೂಡಿಸಿದ ಕೌಶಿಕ್, ಅಶ್ವಿತಾ ನಟನೆಯ ‘ಮಿಸ್‌ಮ್ಯಾಚ್’ ಸಿನಿಮಾ ಟೀಸರ್

ಶೀರ್ಷಿಕೆ ಮೂಲಕ ‘ಮಿಸ್‌ಮ್ಯಾಚ್’ ಸಿನಿಮಾ ಗಮನ ಸೆಳೆದಿದೆ. ಕಳೆದ ಕೆಲವು ದಿನಗಳ ಹಿಂದೆ ತೆರೆಕಂಡಿದ್ದ ಐದು ಕಥೆಗಳ ‘ಬಿ.ಟಿ.ಎಸ್’ ಚಿತ್ರದ ಐವರು ನಿರ್ದೇಶಕರಲ್ಲಿ ಒಬ್ಬರಾದ ಸಾಯಿ ಶ್ರೀನಿಧಿ ಅವರು ಈಗ ‘ಮಿಸ್‌ಮ್ಯಾಚ್’ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ‘ಮಠ’ ಗುರುಪ್ರಸಾದ್ ಅವರ ಗರಡಿಯಲ್ಲಿ ಪಳಗಿದ ಸಾಯಿ ಶ್ರೀನಿಧಿ ಅವರು ಈ ಮೊದಲು ‘ನೋಡಿದವರು ಏನಂತಾರೆ’ ಚಿತ್ರಕ್ಕೆ ಸಹ-ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು. ಈಗ ‘ಮಿಸ್‌ಮ್ಯಾಚ್’ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ‘ಮಿಸ್‌ಮ್ಯಾಚ್’ ಚಿತ್ರದ ಶೂಟಿಂಗ್ ಮುಕ್ತಾಯ ಆಗಿದೆ. ಮಲೆನಾಡಿನ ಸೊಗಡಿನಲ್ಲಿ ಮೂಡಿಬಂದಿರುವ ಒಂದು ಫೀಲ್‌ಗುಡ್ ಫ್ಯಾಮಿಲಿ ರೊಮ್ಯಾಂಟಿಕ್ ಕಾಮಿಡಿ ಕಥಾಹಂದರ ಈ ಸಿನಿಮಾದಲ್ಲಿ ಇರಲಿದೆ ಎಂದು ಚಿತ್ರತಂಡ ಹೇಳಿದೆ. ಕಥೆಗೆ ತಕ್ಕಂತೆ ಮಲೆನಾಡ ಭಾಗದಲ್ಲೇ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ.

Read original on TV9 Kannada Get the app

Licensed summary · LicensedSummary

Related briefs