TV9 Kannada · DistrictNews · 2026-09-27
ಏತ ನೀರಾವರಿ ಯೋಜನೆ ಹೆಸರಲ್ಲಿ ಅವೈಜ್ಞಾನಿಕ ಕಾಮಗಾರಿ: ಮುಂಡರಗಿ-ಯಕ್ಲಾಸಪುರ ರಸ್ತೆಯಲ್ಲಿರುವ
ಗದಗ, ಸೆಪ್ಟೆಂಬರ್ 27: ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಿಂದ ಯಕ್ಲಾಸಪುರ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಕಾಮಗಾರಿಯು ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅರಣ್ಯ ಇಲಾಖೆಯಿಂದ ಕಳೆದ ಹತ್ತು ವರ್ಷಗಳಿಂದ ಪೋಷಿಸಲ್ಪಟ್ಟ, ಸುಮಾರು ಎಂಟು ಕಿಲೋಮೀಟರ್ ಉದ್ದದ ರಸ್ತೆಯಲ್ಲಿರುವ ಸಾವಿರಾರು ಹೆಮ್ಮರಗಳಿಗೆ ವಿದ್ಯುತ್ ಕಂಬಗಳ ಅಳವಡಿಕೆಯಿಂದ ತೊಂದರೆ ಎದುರಾಗಿದೆ. ಈ ರಸ್ತೆಯಲ್ಲಿ ಬೃಹದಾಕಾರವಾಗಿ ಬೆಳೆದು ನಿಂತಿರುವ ಆಲ, ಹೊಂಗೆ, ಬೇವಿನಂತಹ ಮರಗಳು ಪ್ರಯಾಣಿಕರಿಗೆ ಹಚ್ಚ ಹಸಿರಿನ ಸೌಂದರ್ಯವನ್ನು ನೀಡುತ್ತವೆ. ಆದರೆ, ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಮತ್ತು ಹೆಸ್ಕಾಂನಿಂದ ಯಾವುದೇ ಅನುಮತಿ ಪಡೆಯದೆ ನೂರಾರು ವಿದ್ಯುತ್ ಕಂಬಗಳನ್ನು ನೆಟ್ಟಿದ್ದಾರೆ.
Read original on TV9 Kannada Get the app
Licensed summary · LicensedSummary
Related briefs
- Women's doubles World No 1 Tan Ning said that the schedule has been unfair
- If Not Released, I Will Go To Assam': CJP founder Abhijeet Dipke warns Himanta
- Workers replacing a water main on Philadelphia's Spruce Street in 2017
- Top 10 investors in the M3M Hurun India Rich List 2026: Rekha Jhunjhunwala leads
- Kriti Sanon Shares Hard-Hitting Note On Daughter’s Day Amid Sexual Assault