TV9 Kannada · DistrictNews · 2026-09-27
ಏಕದಿನದಲ್ಲಿ 15 ಸಾವಿರ ರನ್ಗಳ ಸರದಾರ ನಮ್ಮ ಕಿಂಗ್ ಕೊಹ್ಲಿ..!
ತಿರುವನಂತಪುರದಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ಏಕದಿನ ಕ್ರಿಕೆಟ್ನಲ್ಲಿ 15 ಸಾವಿರ ರನ್ಗಳ ಮೈಲಿಗಲ್ಲನ್ನು ದಾಟಿದ್ದಾರೆ. ಇದರೊಂದಿಗೆ ಏಕದಿನ ಕ್ರಿಕೆಟ್ನಲ್ಲಿ ಈ ಸಾಧನೆ ಮಾಡಿದ ಎರಡನೇ ಆಟಗಾರನೆನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ 18426 ರನ್ ಕಲೆಹಾಕಿದ್ದಾರೆ. ಟೀಂ ಇಂಡಿಯಾ ಇನ್ನಿಂಗ್ಸ್ನ 29ನೇ ಓವರ್ನ 5ನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ಕೊಹ್ಲಿ 15000 ರನ್ಗಳ ಗಡಿ ದಾಟಿದರು.ಇದರ ಜೊತೆಗೆ ಕೊಹ್ಲಿ ತಮ್ಮ 80ನೇ ಏಕದಿನ ಅರ್ಧಶತಕವನ್ನು ಪೂರೈಸಿದರು.
Read original on TV9 Kannada Get the app
Licensed summary · LicensedSummary
Related briefs
- IndiGo A321 suffers tail strike during go around at Bangalore; plane lands
- Villagers Urge Action Against Tallarampur VDC
- The state has given India a remarkable cultural inheritance: Sagol Kangjei
- 4 days on, ex-ED officer Niranjan Singh quits Amritpal’s party over
- Kohli, Gill Tons Give India 8-Wicket Win Over West Indies in 1st ODI